Thursday, September 14, 2006

ಒಂದು ಮೀಟಿಂಗ್ ಬೆನ್ನತ್ತಿ......!!!!

ಬೆಳಿಗ್ಗೆಯಿಂದ ಒಂದು ಮುನಿಸು..ಅಸಹನೆ.... ಊರೆಲ್ಲ ಮೋಡ ಹಾಕಿದ್ರು ಮಳೆ ಮಾತ್ರ ನನ್ನ ಮೇಲೇನೆ!

ಅವಸರದಿಂದ ಎದ್ದಾಗ ಎಂಟು ಗಂಟೆ ಆಗಿದ್ದು....ಮೀಟಿಂಗ್ ಇರೋದು ..ನನಗೆ ಲೇಟ್ ಆಗಿದ್ದು..ಎಲ್ಲ ಒಮ್ಮೆಗೆ ಹೊಳೀತು.

ಆದಷ್ಟು ಬೇಗ ಸ್ನಾನ ಮಾಡಿ .ರೆಡಿ ಆಗಿ ಬಸ್ ನಂಬರ್ 135 ಹತ್ತಿದಾಗ ಮಳೆಗೆ ಅರ್ಧ ನೆನೆದಿದ್ದೆ

ಬಸ್ ನಲ್ಲಿರೊ ಎಸಿಯಿಂದ ಪೂರ ನೆನೆದು ನಡುಗೋಕೆ ಶುರು ಮಾಡಿದೆ...

ಮೀಟಿಂಗ್ ನಲ್ಲಿ ಏನೇನು ಹೇಳ್ಬೇಕು ಅಂತ ಮನಸನಲ್ಲೇ ಅಂದ್ಕೊತಿದ್ದ ಹಾಗೆ ಯಾಕೋ ಬಸ್ ಮುಂದೆ ಹೋಗವಲ್ದಲ್ಲ ಅಂತ ಹೊರಗೆ ನೋಡಿದೆ..

ಮೊದಲೇ ಡಬಲ್ ಸೈಜ್ ಬಸ್..ಟ್ರಾಫಿಕ್ ಜಾಮ್ ನಲ್ಲಿ ಕತ್ರಿ ಹಾಕ್ಕೊಂಡು ನಿಂತಬಿಟ್ಟಿತ್ತು.

ಹೊರಗಡೆ ಬಂದು ದೂಡಿ ಮುಂದೆ ಹೋಗ್ಸೊನಾ ಅನ್ನೊವಷ್ಟು ಸಿಟ್ಟು ಬಂತು..

ಬಸ್ ನಲ್ಲಿ ಇರೋರಿಗೆ ಏನು ಅನಿಸ್ತಾ ಇಲ್ವೆ....ಒಬ್ರು ಪಪೆರ್ ಒದ್ತಿದ್ರೆ..ಒಬ್ರು ಹಾಡು ಕೇಳ್ತಾ ಇದಾರೆ

ಕೆಲವರಿಗೆ ಸುಡೊಕು ಹುಚ್ಚು..ಮೆಕ್-ಅಪ್ ಕೂಡ ಇಲ್ಲೆ

ಛೆ! ಯಾರಿಗೂ ಆಫಿಸ್ ಬಗ್ಗೆ ಅವಸರಾನೆ ಇಲ್ವಾ ಅನಿಸ್ತು..!!??!!

ಅಂತು ಇಂತು...ಓಲಾಡಿ ತೇಲಾಡಿ ನಾನಿಳಿಯೋ ಬಸ್ ಸ್ಟಾಪ್ ಗೆ ಬಂದಾಗ....ವಾಚ್ ಮುಳ್ಳು ನಾನು ಲೇಟ್ ಅಗಿದೀನಿ ಅಂತಾ ಕನ್ಫರ್ಮ್ ಮಾಡ್ತು....

ಇನ್ನೇನೂ ಮಾಡೋಕೆ ಆಗಲ್ಲ ..ಹೆಂಗಾದ್ರು ಲೇಟ್ ಆಗಿದೆ ..ಅರಾಮ ಆಗಿ ಹೋಗೋಣ ಬಿಡು ಅಂದ್ರೆ..ಆ ಧಡಿಯಾ ಹೆಗಲಿಗೆ ಹಾಯ್ಕೊಂಡೆ ಹೋಗೋದಾ?

ಈ ಜನಕ್ಕೆ ಯಾಕಿಷ್ಟು ಅವಸರಾ ಅಂತಾ!!??!! ವಿಚಿತ್ರ ಅಲ್ವಾ!!!

ಹೇಗೊ ಮಾಡಿ ಆಫಿಸ್ ಸೇರ್ಕೊಂಡಾಗ ಗೊತ್ತಾಯ್ತು..... ಮೀಟಿಂಗ್ ಇನ್ನು ನಡೀತಾ ಇದೆ ಅಂತಾ..ಸದ್ದಿಲ್ಲದೆ ಹೋಗಿ ಸೇರ್ಕೊಂಡೆ...

ಕಲೀಗು ಗೊಣಗ್ತಾ ಇದ್ದಾ..'ಎನ್ ಕೊರೀತಾನಯ್ಯ ಈ ಮ್ಯಾನೆಜರ್! .ಸುಮ್ಮನೆ ಮನೆಯಲ್ಲಿ ಮಲಗಿದ್ರೆ ಚೆನ್ನಾಗಿತ್ತು '...ಅಂತಾ


ನಾನೂ ಸಣ್ಣದಾಗಿ ಆಕಳಿಸಿ ಮ್ಯಾನೆಜರ್ ಹೇಳೊದನ್ನ ವೇದ ವಾಕ್ಯ ಅನ್ನೋ ಥರ ಕೇಳ್ತಾ ಕೂತೆ....ಇನ್ನು 5 ನಿಮಿಷ ತಾನೆ..!!!!

Saturday, September 09, 2006

ಪ್ರೀತಿಯೊಂದಿಗೆ!!!!!

ನೀನಂದ್ರೆ ಇಷ್ಟ!!!!!


ನಿನಗೆ ಬರೆಯುವ ಪ್ರತಿ ಸಾಲು ಹೇಳೊದು ಅದೇ.
ಈ ಕೆಲವು ತಿಂಗಳು ಹೇಗೆ ಕಳೆದೆ ಅಂತಾ ಗೊತ್ತು...... ಇನ್ನು ಬರುವ ತಿಂಗಳುಗಳ, ದಿನಗಳ ಅಸಂಖ್ಯ ಕ್ಷಣಗಳನ್ನ ಹೇಗೆ ಕಳೀಲಿ ಅಂತ ಚಿಂತೆ!!ದಿನ ಕಳೆದಂತೆ ನಿನ್ನ ಕಾಣುವ ಬಯಕೆ, ಮುದ್ದಿಸುವ ಹಂಬಲ, ಸುಮ್ಮನೆ ಜೊತೆಯಲ್ಲಿ ಇರುವ ಆಸೆ, ನಟ್ಟಿರುಳ ರಾತ್ರಿಯಲ್ಲಿ ಅಪ್ಪುಗೆಯ ಆಳದಲ್ಲಿ ಬಚ್ಚಿಡ ಬೇಕೆಂಬ ತವಕ....ಹೀಗೆ ಏನೆಲ್ಲ ಮನಸಿನಲ್ಲಿ ಬೆಳೀತಾನೆ ಇವೆ. ನಿಟ್ಟುಸಿರಾಗಿ ಮತ್ತೆ ಅಂದುಕೊತೇನೆ ಇನ್ನೆಷ್ಟು ದಿನ ಹೀಗೆ, ನಾಳೆ ನಿನ್ನೆಗಿಂತ ಬೇಗ ಬರ್ತದೆ ಅಂತ.ಕೆಲವೊಮ್ಮೆ ಮನಸು ಎಷ್ಟೊ ದಿನಗಳ ಮುಂದಿನ ಘಳಿಗೆಯನ್ನ ನೆನೆಸಿ ಕಚಿಗುಳಿಯಾಗುತ್ತದೆ. ಈ ಕಾಯುವಿಕೆಯಲ್ಲೂ ಒಂದು ಸವಿ ಇದೆ ಅಲ್ವಾ.....ನಿನ್ನ ಬೆಳಗು ನನ್ನಿಂದ.....ನನ್ನ ಬೆಳಗು ನಿನ್ನಿಂದ ಶುರು ಆಗುವ ರೀತಿ ಮನಸಿಗೆ ಅದೆಷ್ಟು ಖುಶಿ ಕೊಡತ್ತೆ ಗೊತ್ತಾ ಮೆತ್ತನೆಯ ಹಾಸಿಗೆಯ ನುಣುಪಿನಲ್ಲಿ ಸದಾ ನಿನ್ನದೊಂದು ಬಿಸಿ ಉಸಿರು ಬೆಚ್ಚನೆ ಮಲಗಿರುತ್ತದೆ...ತಬ್ಬಿ...ಮುದ್ದಿಸಿ....ಕಾಡಿಸಿ ನನ್ನ ಕನಸಿಗೊಂದು ಮುನ್ನುಡಿ ಹಾಕುತ್ತೇನೆ. ನಾಳಿನ ಬೆಳಗು ಮತ್ತೆ ನಿನದೆ.ಮಾತು ಹೇಳಿದಷ್ಟು ಕಡಿಮೆ....ಕೇಳಿದಷ್ಟು ಕಡಿಮೆ....ಸುಮ್ಮನೆ ನಿನದೊಂದು ನಗು....ಮುನಿಸು...ಪ್ರೀತಿಯ ಮಾತು...ನಿನ್ನ ಮೆಚ್ಚಿನ 'ಟೈಟ್ ಹಗ್ಗು!' .. ಹುಹ್! ಪ್ರೀತಿ ಅಂದ್ರೆ ಇದೇನಾ???

ಬರಿ ನಿನ್ನೆಯ ನೆನಪಲ್ಲಿ ನಾಳೆಯ ಕನಸಲ್ಲಿ ಜೀವಿಸುತ್ತಿದ್ದ ನನಗೆ ..ಇಂದಿನ ಪ್ರೀತಿ ಹುಟ್ಟಿಸಿದವಳು ನೀನೇ ಅಲ್ವ.. ದಿನದ ಬೇಸರದಲ್ಲಿ ಮನಸು ಪಿಚ್ಚೆನಿಸಿದಾಗ ನಿನ್ನ ಮಾತಿನ ಆಳದಲ್ಲಿ ಕಳೆದು ಎಲ್ಲ ಮರೆಯುತ್ತೇನೆ....

ಮತ್ತೆ ಎರಡು ನೆನಪು ಹೆಗಲೇರುತ್ತವೆ..ಮೂರು ಹೊಸ ಕನಸಿನೊಂದಿಗೆ!!!!

ಯಾವಾಗಲೂ ಹೀಗೆ!!


ನಾಗ್ತಿ ಬರೆದಿರೊ ಹಾಡು ನೆನಪಿಗೆ ಬರತ್ತೆ....

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನೆಪೆಂದರೆ ಮಳೆಬಿಲ್ಲ ಛಾಯೆ!!!!!!.....