ಯಾಕೆ ಹೀಗೆ!!
ಇವತ್ತು ಮನಸು ಇಷ್ಟು ಭಾರ ಯಾಕಾಯ್ತೋ....
ಯೋಚನೆ ಮಾಡೋಕೇ ಶಕ್ತಿ ಇಲ್ವೆನೊ ಅನಿಸ್ತಿದೆ...
ಅಷ್ಟು ವೀಕ್ ಆಗಿಬಿಟ್ಟೆನಾ .....
ಹೃದಯ ಬಡಿತ ಇವತ್ತು ನೋವು ಕೊಡ್ತಾ ಇದೆ ಅನಿಸ್ತಿದೆ....
ಕಣ್ಣಿಗೆ ಬೇರೆ ಏನೂ ಕಾಣ್ತಿಲ್ಲಾ....
ಕೈಯಲ್ಲಿದ್ದ ಹೂದಾನಿ ಬಿರುಕು ಬಿಟ್ಟಿದೆಯೇನೋ ಅನಿಸ್ತಿದೆ...
ಇಷ್ಟೊಂದು ಅಸಹಾಯಕತೆ ನಾ...
ಈ ಕನಸುಗಳೇ ಬೇಡಾ ಅನಿಸ್ತಿದೆ...
ಸಂಬಂಧಗಳಿಂದ ದೂರ ಹೋಗ್ಬೇಕು ಅನಿಸ್ತಿದೆ....
ಈ ಒಂಟಿತನಾನೇ ಆತ್ಮೀಯ ಅನಿಸ್ತಿದೆ..
ನನ್ನ ಮೇಲೇನೆ ನಂಬಿಕೆ ಕಡಿಮೆ ಆಗ್ತಿದೆ...
ಜೀವನ ಇಷ್ಟೇನಾ ಅನ್ನೊ ಭ್ರಮನಿರಸನ ಕಾಡ್ತಿದೆ.....
ಎಷ್ಟು ಅರಾಮಾಗಿ ಹೇಳಿಬಿಟ್ಟಳಲ್ಲಾ. ಇಷ್ಟು ಚಿಕ್ಕ ವಿಷಯ ಮನಸಿಗೆ ಯಾಕಷ್ಟು ಚುಚ್ಚ ಬೇಕು...