Thursday, June 22, 2006

ಒಹ್! ನೆನಪೇ!!!

ಪದೆ ಪದೆ ನೆನಪಾದೆ
ಪದೆ ಪದೆ ನೆನೆದೆ........

ನೆನಪುಗಳ ಗುಡ್ಡೆ ಹಾಕ್ಕೊಂದು ಕುತ್ಗೊಂಡಿದೀನಿ.....ಯಾವುದು ಇಷ್ಟಾ ಅಂತಾ ಹೇಗೆ ಹೇಳಲಿ....ಎಲ್ಲ ಇಷ್ಟಾನೇ....ಎಲ್ಲ ನಿನ್ನವೇ....
ಮೊದಲ ಮಾತಿನ ಕಂಪನದಿಂದ...ನಿನ್ನೆ ಮೊನ್ನೆಯ ಉಸಿರಿನ ಕಂಪಿನವರೆಗೆ....ಎಲ್ಲವೂ ಪ್ರಿಯವೆ....
ಇನ್ನು ಎಷ್ಟು ಹಗಲು ಎಷ್ಟು ರಾತ್ರಿಗಳು ಹೀಗೆ ಒಂಟಿ ಅಂದುಕೊಂಡಾಗಲೆಲ್ಲ ಈ ನೆನಪುಗಳ ಅಪ್ಪುಗೆಯಲ್ಲಿ ಬೇಸರ ಮರೆಯುತ್ತೇನೆ...
ಮನಸು ಮುನಿಸೆದ್ದು ಹಟ ಹಿಡಿದಾಗ ಒಂದು ಕಚಗುಳಿಯಿಟ್ಟು ಮುದ್ದಿಸಿದರೆ ಇನ್ನೊಂದು ಪ್ರೀತಿಯ ಹಾಡೊಂದ ನೆನಪಿಸಿ ಕಣ್ಣೀರಾಗಿಸುತ್ತದೆ.....

ನೆನಪುಗಳ ಮಾತು ಮಧುರ
ಮೌನಗಳ ರಾಗ ಮಧುರ

ಹೀಗೆ ಕೆಲವೊಮ್ಮೆ ನಿನ್ನ ನೊಡಲೇ ಬೇಕೆಂಬ ತುಮುಲ ಹೆಚ್ಚುತ್ತದೆ...ನಿನ್ನ ಪ್ರತಿ ಮಾತನ್ನು ಮನಸಿನ ಮೂಲೆಯಲ್ಲಿ ಬಂಧಿಸಬೇಕೆನಿಸುತ್ತದೆ.....
ಬಿಸಿ ಮುತ್ತಿನ ಬಿಸುಪಿನಲ್ಲಿ ನಿನ್ನ ಕರಗಿಸಿ ಬಿಡುವ ಆಸೆ ಹುಟ್ಟುತ್ತದೆ....
ಕಾಲದ ಕಣ್ಣು ತಪ್ಪಿಸಿ ಈ ದಿನಗಳನ್ನು ಬೇಗ ಮುಗಿಸಿ ನಾಳೆ ಇಂದೇ ಆಗಬಾರದೆ ಅಂತ ಮನಸು ಕೇಳುತ್ತದೆ....
ಏಕಿಷ್ಟು ದೂರ.....ಪ್ರತಿ ಕ್ಷಣ ಹೃದಯ ಕೇಳುವ ಪ್ರಶ್ನೆ....ಏನು ಹೇಳಿ ಸಮಾಧಾನಿಸಲಿ??...

ರಾತ್ರಿಯ ಕನಸುಗಳಿಗೆ ಬರೀ ಭರವಸೆಯ ಉತ್ತರ ಕೊಟ್ಟು ಎಷ್ಟೂ ಅಂತಾ ಸುಮ್ಮನಿರಸಲಿ....?

ಇವತ್ತು ಮಾತ್ರ ಒಂದಂತೂ ನಿಟ್ಟುಸಿರಾಗಿ ಉರುಳಿ ಹೊಯ್ತು.....ಅಷ್ಟಕ್ಕೆ ಎದೆ ಬಡಿತ ನಿಂತೇ ಹೋಯಿತು ಅನಿಸಬೇಕೆ??

ಬೆಳದಿಂಗಳಾಗಿ ಬಾ....
ಕಣ್ಣ ನಗುವಿನೊಳಗೆ....

ಅಷ್ಟಾಗಿಯೂ ನಿನ್ನ ನೆನಪಿಸುವಾಗಲೆಲ್ಲ ಆಸೆಯ ಕನಸು ಮನಸು ತುಂಬಿ ಬೆಚ್ಚಗಾಗಿಸುತ್ತೆ....ಚಳಿಗಾಲದ ಬಿಸಿಲಿನಂತೆ....
ಕಾಯ್ದ ಹೃದಯಕ್ಕೆ ತಂಪನ್ನೀಯುತ್ತದೆ .....ಬೇಸಿಗೆ ಸಂಜೆಯ ತಂಗಾಳಿಯಂತೆ....

ಇಂದು ಬೆಳಿಗ್ಗೆ ನಿನ್ನ ಕನಸನ್ನ ಬಿಟ್ಟೇಳಿಸಿದ್ದು ನೀನೆ ಅಲ್ಲವೆ....

ಪ್ರತಿ ಬೆಳಗು ನಿನ್ನದಿರಲಿ
ರಾತ್ರಿ ನಿನ್ನ ನೆನಪಿಗಿರಲಿ......

ಈ ನೆನಪುಗಳಿಗೆ ಕೊನೆ ಇರದಿರಲಿ...............

2 Comments:

At 3:33 PM, Blogger Anveshi said...

ಓಯ್ ಅಲೆಮಾರಿಗಳೇ,
ನೀವ್ಯಾಕೆ ನಮ್ಮ ಕಾಕ ದೃಷ್ಟಿಗೆ ಬಿದ್ದಿಲ್ಲ ಅನ್ನೋದೇ ಗೊತ್ತಾಗ್ತಿಲ್ಲ.
ಇಷ್ಟೊಳ್ಳೇ ಬ್ಲಾಗು ಇಟ್ಟುಕೊಂಡು ಸುಮ್ನೆ ಕೂತಿದ್ದೀರಲ್ಲಾ...

ಪಾಪು.ಅಲೆಮಾರಿ ಅಂತ ಕಾಮೆಂಟ್ ಬಂದ ಎಳೆ ಹಿಡಿದು ಹೊರಟಾಗ ನೀವು ಸಿಕ್ಕಿದ್ರಿ.

ಪಾಪು ನೀವೆನಾ ಅಥವಾ ಬೇರೇನಾ?
ಏನೇ ಆದ್ರೂ ನಿಮ್ಮ ಬ್ಲಾಗಿನ ಲಿಂಕ್ ಹಾಕಿಕೊಳ್ಳುವೆ. ಬೇಜಾರುಮಾಡಿಕೊಳ್ಳಬಾರದೆಂದು ಕೋರಲಾಗಿದೆ.

 
At 3:10 PM, Blogger Niveditha said...

ನಿಮ್ಮ ಬರಹಗಳನ್ನ ಓದಬೇಕು ಅಂತ ತುಂಬಾ ಅನ್ನಿಸ್ತಿದೆ..
ದಯವಿಟ್ಟು ನಿಮ್ಮ ಓದುಗರಿಗೆ ಎನಾದ್ರೂ ಕೊಡಿ..
ಕಾಯ್ತಾ ಇದ್ದೀನಿ.

 

Post a Comment

<< Home