ದೂರವಿರು....!!
ಮರೆತು ಹೋಗಿತ್ತು. ನೀನಿಲ್ಲದೆ ಹೋದ್ರೆ ಹೇಗೆ ಅಂತ ಯೋಚಿಸುವ ಮನಸ್ಥಿತಿ ಕೂಡ ಇಲ್ಲ.
ಖಾಲಿ ಅನಿಸಬಹುದು ಏನೋ. ಸಂಜೆ ನೀನು ಇರಲ್ಲ. ಏನೇನು ಮಾಡಬಹುದು?. ಸುಮ್ಮನೆ
ಮಲಗಿ ಬಿಡೋದ ಅಂತ...ಅದ್ದರೆ ಅದು ಅಷ್ಟು ಸಲೀಸಲ್ಲ. ಸುಮ್ಮನೆ ಇದ್ದಷ್ಟೂ ನಿನ್ನ ಬಗ್ಗೆನೇ
ವಿಚಾರಗಳು. ಅವಕ್ಕೆ ಉತ್ತರ ಕೊಡೊ ಅಷ್ಟರಲ್ಲೇ ಮನಸು ರೊಚ್ಚಿಗೆದ್ದು ಹೋಗಿರ್ತದೆ.
ಏನೂ ಯೋಚಿಸದೆ ಇರೋದು ಹೇಗೆ?. ಏನಾದರೂ ಮಾಡಬೇಕಲ್ಲ. ಒಂದು ಉಸಿರಿಗೂ
ವ್ಯವಧಾನ ಇರಬಾರದು.
ಇವತ್ತೆಲ್ಲ ಬಿಸಿಲು ಬಿದ್ದು ಸೆಖೆ ಇದ್ರೆ ಸರಿಯಾಗ್ತಿತ್ತೋ ಏನೋ. ಹಸಿರು, ಒದ್ದೆ ನೋಡಿದಷ್ಟು
ಅಸಹನೆ ಜಾಸ್ತೀನೆ. ಈಗೀಗ ತಣ್ಣಗೆ ಇರೋ ಭಾವನೆನೆ ರೇಜಿಗೆ ತರ್ತಾ ಇದೆ. ಹಸಿರೆಲ್ಲ ತಣ್ಣಗೆ,
ತಣ್ಣಗಿರೋದೆಲ್ಲ ಒದ್ದೆ ಅನ್ನೋ ಹಾಗೆ.
ನಾಳೆ ಬಂದೆ ಬರತ್ತೆ ಅಂತ. ಬದಲಾವಣೆ ಮೇಲೆ ಒಂದು ಸಣ್ಣಗೆ ಹಿಂಜರಿಕೆ, ಮುನಿಸು.
ಸುಮ್ಮನೆ ಎದ್ದು ಹೋಗಿ ಬಿಡಬೇಕು ಅನಿಸಿದರೂ ಮುರಿಯಲಾರದ ಬಂಧಗಳು. ದಿನ
ಕಳೆದಷ್ಟು ಬಿಗಿಯುತ್ತಲೇ ಇವೆ. ಬೇಕು ಎಂದು ಬಯಸಿ, ಹಠ ಹಿಡಿದು ಜಯಸಿದ್ದಕ್ಕೆ
ನಿರಾಳತೆಯ ಜೊತೆಗೆ ಇಷ್ಟು ಸಾಕು ಅನ್ನುವ ನಿರ್ಲಿಪ್ತತೆ.
ಹೊಯ್ತೇನೋ? ಸುಮ್ಮನೆ ಕುಳಿತು ಎದೆ ಬಡಿತ ಕೇಳುವ ಸಹನೆ ಎಲ್ಲಿ ಹೋಯ್ತು? ಜೀವನ
ಬರೀ ಓಡುವುದೇ ಆದರೆ ನಿಲ್ಲುವುದು ಕಲಿಯಲೇ ಬಾರದಿತ್ತೇನೋ?
ನಿನ್ನ ತಲೆ ಸವರಿ ಬಸ್ಸಿನಿಂದ ಇಳಿದಾಗಲೇ ಕಾಡಲಿಕ್ಕೆಸುರುವಾದದ್ದು, ನಾಳೆ ಅನ್ನೋದು
ಹೇಗಿರಬಹುದು? ಅಷ್ಟೆಲ್ಲ ಹೊತ್ತು ಏನು ಮಾಡಬೇಕು? - ನೂರಾರು ಪ್ರಶ್ನೆಗಳು.