ಎಷ್ಟು ದೂರ!!!
ಅಪ್ಪನಿಂದ ಇಷ್ಟು ದೂರ ಹೇಗೆ ಬಂದೆ ಅಂತ ಇನ್ನು ಅರ್ಥ ಆಗ್ತಾ ಇಲ್ಲಾ..
ಬರೀ ಸಿಟ್ಟಾ....ಭ್ರಮನಿರಸನವಾ..ಇಲ್ಲ ಸ್ವಾರ್ಥಾನಾ.....ರಾತ್ರಿಯ ಕೆಲವು ಕ್ಷಣ ಅವರ ನೆನಪು ಬಂದು ಮನಸು ಭಾರವಾಗುತ್ತೆ....ಅವರು ಏಕೆ ನನ್ನ ಅರ್ಥ ಮಾಡ್ಕೋತಾ ಇಲ್ಲ ಅನ್ನೊ ಸಂಕಟ, ನನ್ನ ಅಸಹಾಯಕತೆಯನ್ನ ಇನ್ನೂ ಹೆಚ್ಚಿಸುತ್ತೆ....
ಅವರಿಗೆ ಮಗ ಅನ್ನೊ ಹಕ್ಕು....ನನಗೆ ಅಪ್ಪ ಅನ್ನೊ ಸದರು....ಯಾವುದು ಹೆಚ್ಚು ಯಾವುದು ಸರಿ...
ಅಮ್ಮನಿಗಿದು ಅರ್ಥವಾಗಿದೆ ಅಂತಾ ನಂಬಿಕೆ ಇಲ್ಲಾ...
ಬರೀ ಕನಸಿನಲ್ಲಿ ಜೀವಿಸಿದ್ದು ಬಹಲ ಕಡಿಮೆ...ಕಂಡ ಕನಸು ಹೀಗೆ ಇಷ್ಟೊಂದು ಸಂಕೀರ್ಣ ಆಗುತ್ತೆ ಅನಿಸಿದ್ದಿಲ್ಲ....
ಹಿಂದಿರುಗದ ದಾರಿ ತುಳಿದಾಗಿದೆ....ಮನಸಿನಲ್ಲಿ ಇಷ್ಟೊಂದು ಹುದುಗಿರುವುದನ್ನು ಕಿತ್ತೊಗೆಯುವುದು ಸಾಧ್ಯವಾಗದೆ ಹೊಗ್ಬಹುದು...
ಹೇಗೆ ಅವರನ್ನ ಒಪ್ಪಿಸಲಿ ...ಗೊತ್ತಿಲ್ಲಾ....
2 Comments:
ಖುಷಿಯಾಯಿತು ನಿಮ್ಮ ಬ್ಲಾಗು ನೋಡಿ
ತುಂಬಾ ಚೆಂದಗೆ ಬರೀತೀರಿ. ನಿಜಕ್ಕೂ ಕಣ್ಣು ಹನಿಗೂಡಿತು. ನಿಮ್ಮೆಲ್ಲ ಬರಹಗಳನ್ನು ಒಂದೇ ಉಸಿರಿಗೆ ಓದಿದೆ. ಹೀಗೆ ಬರೀತಾ ಇರಿ. ಭಾವನೆಗಳ ಸಂಘರ್ಷಗಳನ್ನು ಬಿಂಬಿಸುವ ಕಲೆ ನಿಮಗೆ ಸಿಧ್ಧಿಸಿದೆ. ಶುಭವಾಗಲಿ. ಅಮ್ಮನ ಹಬ್ಬಕ್ಕೆ ಮರೆಯದೆ ಬನ್ನಿ.
Post a Comment
<< Home